ಅಪೂರ್ವ ನಿರ್ದೇಶನದ ಓ ನನ್ನ ಚೇತನ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಚಿತ್ರ ಇದೇ ತಿಂಗಳ 15ನೇ ಶುಕ್ರವಾರ ರಾಜ್ಯದಾದ್ಯಂತ ರಿಲೀಸ್
Posted date: 12 Tue, Dec 2023 12:09:29 PM
ಮೊಬೈಲ್ ನೋಡೋ ಮಕ್ಕಳು... ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ...  ದೊಡ್ಡ ತಾರಾಬಳಗವಿಲ್ಲ... ಆದ್ರೆ ದೊಡ್ಡ ತಂತ್ರಜ್ಞರೇ ಕೈ ಜೋಡಿಸಿ ಮಾಡಿರೋ ಅಪ್ಪಟ ರಂಜನೆಯ ಮತ್ತು ಸಂದೇಶವಿರೋ ಸಿನಿಮಾ. ಗುಣಮಟ್ಟದಲ್ಲಿ ದೊಡ್ಡ ಸಿನಿಮಾ.. ಸೂಕ್ಷ್ಮಾಕಥೆಯ ಜೊತೆ ಪ್ರಸ್ತುತತೆಗೆ ತುಂಬಾ ಹತ್ತಿರೋವಿರೋ ವಿಷ್ಯ ಈ ಚಿತ್ರದ ಜೀವಾಳ. ಹೆಸರೇ ಹೇಳುವಂತೆ.. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ. 
 
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಪಡೆದುಕೊಂಡಿದ್ದ ಓ ನನ್ನ ಚೇತನ, ಇದೇ 15ಕ್ಕೆ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ್ತಿದೆ. ಡಾ.ಬಿ.ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನ ಮೂನಿಪ್ಲಿಕ್ಸ್ ಸ್ಟುಡಿಯೋಸ್ ನ ಕೆ.ಎ ಸುರೇಶ್ ಅವ್ರ ಮೂಲಕ ರಿಲೀಸ್ ಮಾಡ್ತಿದ್ದಾರೆ. 
 
ಓ ನನ್ನ ಚೇತನ ಅಪೂರ್ವ ಖ್ಯಾತಿಯ ನಟಿ ಅಪೂರ್ವಗೌಡ (ಆಶಾದೇವಿ) ನಿರ್ದೇಶನದ ಚೊಚ್ಚಲ ಚಿತ್ರ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. 
 
ಓ ನನ್ನ ಚೇತನ ಚಿತ್ರದ ನೀ ಏನೇ ಹೇಳಹ ಅಂಜು ಹಾಡು ರಿಲೀಸ್ ಆಗಿದ್ದು, ಈ ಹಾಡಿಗೆ ಡಿಜಿಟಲ್ ವೇದಿಕೆಯಲ್ಲಿ ಓಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದ್ರ ಜೊತೆಗೆ ಚಿತ್ರದ ಟೈಟಲ್ ಹಾಡು ಕೂಡ ರಿಲೀಸ್ ಆಗಿದ್ದು, ಮ್ಯೂಸಿಕಲಿ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಅಪ್ಪಟ ಹಳ್ಳಿ ಹಿನ್ನೆಲೆಯಲ್ಲಿ ಚಿತ್ರಿಸಿರೋ  ಓ ನನ್ನ ಚೇತನ ನಾಲ್ಕಾರು ಆಯಾಮಗಳಲ್ಲಿ ಗಮನ ಸೆಳೆಯುತ್ತಿದೆ. 
 
ಎಸ್ ಅಂಡ್ ಎಸ್ ಬ್ಯಾನರ್ ನಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಆಗಿ ಬರ್ತಿರೋ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟ್ರಟೈನ್ಮೆಂಟ್ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿರುವಂತೆ ಕಾಣ್ತಿದೆ.  ಮಕ್ಕಳ  ನಟಿಸಿದ್ರು ಎಲ್ಲಾ ದೊಡ್ಡವರೇ ಕೂಡಿ ಮಾಡಿರೋ ಈ ಚಿತ್ರವನ್ನ ಈ ವಾರ ಮಿಸ್ ಮಾಡ್ದೇ ನೋಡಿ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed